|
ಪ್ರಶಸ್ತಿ ಮತ್ತು ಪುರಸ್ಕಾರಗಳು
|
ನಮ್ಮೆಲ್ಲರ ಶ್ರೀಗಂಧ ಫೌಂಡೇಶನ್ ಪ್ರತಿಷ್ಠಾನವು ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅದರಲ್ಲೂ ಬಹು ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಲಕ್ಷಾಂತರ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ಸಮಾಜಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದೆ.
ನಮ್ಮ ಶ್ರೀಗಂಧ ಫೌಂಡೇಶನ್ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಇದೇ ಜೂನ್ ೧೩ರಂದು, ರೋಟರಿ ಬೆಂಗಳೂರು ಸ್ಪಂದನಾ ಸಂಸ್ಥೆಯವರು ಈ ಸಾಲಿನ ಕಮ್ಯುನಿಟಿ ಸರ್ವೀಸ್ ಪ್ರಶಸ್ತಿಯನ್ನು ನೀಡಿ
ಗೌರವಿಸಿರುತ್ತಾರೆ.
ಈ ಪ್ರಶಸ್ತಿಯು ನಮ್ಮ ಸಮಾಜಮುಖಿ ಕಾರ್ಯಗಳಿಗೆ ನೀಡಿದ ಮಹತ್ವದ ಗುರುತಾಗಿದೆ. ಇದು ನಮ್ಮ ತಂಡದ ಶ್ರಮ, ನಮ್ಮ ಸಹಯೋಗಿಗಳ ವಿಶ್ವಾಸ ಮತ್ತು ಸಮುದಾಯದ ಸದಸ್ಯರ ಬೆಂಬಲದ ಫಲಿತಾಂಶವಾಗಿದೆ.
ಈ ಗೌರವವು ನಮ್ಮ ಮುಂದಿನ ಸೇವಾ ಪ್ರಯಾಣಕ್ಕೆ ಹೊಸ ಶಕ್ತಿಯಾಗಿದೆ.
ರೋಟರಿ ಬೆಂಗಳೂರು ಸ್ಪಂದನಾ ಸಂಸ್ಥೆಯವರು ನಮ್ಮ ಕಾರ್ಯವೈಖರಿಯನ್ನು ಗುರುತಿಸಿ, ಸನ್ಮಾನಿಸಿ, ಪ್ರಶಸ್ತಿ ನೀಡಿರುವುದನ್ನು ನಾವು ಅತ್ಯಂತ ಹೆಮ್ಮೆಯಿಂದ ಸ್ವೀಕರಿಸಿ, ವಿನಮ್ರರಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ.
ರೋಟರಿ ಬೆಂಗಳೂರು ಸ್ಪಂದನಾ ಸಂಸ್ಥೆಗೆ ನಾವು ಆಭಾರಿಗಳು ಮತ್ತು ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
ನಮ್ಮ ಪರವಾಗಿ, ಈ ಸನ್ಮಾನವನ್ನು ನಮ್ಮ ಎಲ್ಲ ಸಹಭಾಗಿಗಳಿಗೆ, ದಾನಿಗಳಿಗೆ, ಸ್ವಯಂಸೇವಕರಿಗೆ ಮತ್ತು ನಮ್ಮನ್ನು ಸದಾ ಬೆಂಬಲಿಸುತ್ತಿರುವ ಸಮುದಾಯಕ್ಕೆ ಸಮರ್ಪಿಸುತ್ತೇವೆ.
ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ಸದಾ ನಮ್ಮ ಜೊತೆಗೆ ಇರಲಿ. |
|
|
|
|
|
|